ರತ್ನಯ ಧರ್ಮ ನಗರಿ ಹಲಗಾ: ಜೈನ ಧಾರ್ಮಿಕ ಶಿಕ್ಷಣ ಶಿಬಿರ ಚಾರಿತ್ರ್ಯ 2023
Education JAINISM

Posted by admin on 2023-05-15 07:29:25 |

Share: Facebook | Twitter | Whatsapp | Linkedin


ರತ್ನಯ ಧರ್ಮ ನಗರಿ ಹಲಗಾ: ಜೈನ ಧಾರ್ಮಿಕ ಶಿಕ್ಷಣ ಶಿಬಿರ ಚಾರಿತ್ರ್ಯ 2023

ಹಲಗಾ, ಬೆಳಗಾವಿ:  ಹಲಗಾ ದಿಗಂಬರ್ ಜೈನ ಸಮಾಜದ ವತಿಯಿಂದ ದಿನಾಂಕ 22 -05 -2023  ರಿಂದ 26 -05 -2023  ರ ವರೆಗೆ ಐದು ದಿನಗಳ ಧಾರ್ಮಿಕ ಶಿಕ್ಷಣ ಸಂಸ್ಕಾರ ಶಿಬಿರವನ್ನು ಹಲಗಾ ಗ್ರಾಮದ ಶ್ರೀ ೧೦೦೮ ಭ. ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ  ಆಯೋಜಿಸಲಾಗಿದೆ. ಮಕ್ಕಳನ್ನು ಚಿಕ್ಕಂದಿನಿಂದಲೇ ಧಾರ್ಮಿಕ ಪಾಠ ಹಾಗೂ ಧಾರ್ಮಿಕ ಶಿಬಿರಗಳ ಮುಖಾಂತರ ತಿದ್ದಿ ಧಾರ್ಮಿಕರನ್ನಾಗಿ ಮತ್ತು ಸುಸಂಸ್ಕಾರಿತನ್ನಾಗಿ ಮಾಡುವುದು ಈ ಶಿಬಿರದ ಉದ್ದೇಶವಾಗಿದೆ. ಶಿಬಿರದಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಅಲ್ಲದೆ ವ್ಯಕ್ತಿತ್ವ ವಿಕಸನ, ಚಿತ್ರಕಲೆ, ಮುಂತಾದ ವಿಷಯಗಳನ್ನು ಕಲಿಸಲಾಗುವುದು. 


ಶಿಬಿರದ ಸೂಚನೆಗಳು:

  • ಕಡ್ಡಾಯವಾಗಿ ಬಿಳಿಯ ಸಮವಸ್ತ್ರದಲ್ಲಿರಬೇಕು.
  • 8  ವರ್ಷ ಮೇಲ್ಪಟ್ಟ ಮಕ್ಕಳು ಮಾತ್ರ ಶಿಬಿರದಲ್ಲಿ ಭಾಗವಹಿಸಬಹುದು.
  • ಪ್ರತಿದಿನ ವಿದ್ಯಾರ್ಥಿಗಳು ಬೆಳಿಗ್ಗೆ 7 :30  ಕ್ಕೆ ಹಾಜರಿರಬೇಕು.
  • ಮಕ್ಕಳಿಗೆ ಅಲ್ಪೋಪಹಾರ ಮತ್ತು ಊಟದಾ ವ್ಯವಸ್ಥೆ ಮಾಡಲಾಗುವುದು.
  • ಪ್ರತಿದಿನ ವಿದ್ಯಾರ್ಥಿಗಳು ಅಷ್ಟದ್ರವ್ಯದ ಸಾಮಗ್ರಿಗಳನ್ನು ಮನೆಯಿಂದ ತಾವೇ ತೆಗೆದುಕೊಂಡು ಬರಬೇಕು.
  • ಶಿಬಿರದಲ್ಲಿ ಸಂಸ್ಕಾರದ ಪುಸ್ತಕಗಳನ್ನು ಕೊಡಲಾಗುವುದು.


ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಳಾಸಕ್ಕೆ ಭೇಟಿ ನೀಡಿ ಅಥವಾ ಕೆಳಗೆ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ.

ಶ್ರೀ 1008 ಭ. ಪಾರ್ಶ್ವನಾಥ ದಿಗಂಬರ ಜೈನ ಮಂದಿರ, ಬಸ್ತಿ ಗಲ್ಲಿ, ತಾಲೂಕ / ಜಿಲ್ಲಾ ಬೆಳಗಾವಿ, ಕರ್ನಾಟಕ - 590020 

  • ಶ್ರೀ ಧನ್ಯಕುಮಾರ್ - 8296 219 108
  • ಶ್ರೀ ಸಂತೋಷ - 9110 649 394
  • ಶ್ರೀ ಮಹಾವೀರ - 7812 951 008 

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2024