ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಂಬುಜ ಜೈನ ಮಠದ ಪೀಠಾಧಿಪತಿಗಳಾದ ಜಗದ್ಗುರು ಪರಮ ಪೂಜ್ಯ ಸ್ವಸ್ತಿ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರ 41 ಜನ್ಮದಿನ ಶುಭಸಂದರ್ಭ
General JAINISM

Posted by admin on 2023-05-18 18:34:31 |

Share: Facebook | Twitter | Whatsapp | Linkedin


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಂಬುಜ ಜೈನ ಮಠದ ಪೀಠಾಧಿಪತಿಗಳಾದ ಜಗದ್ಗುರು ಪರಮ ಪೂಜ್ಯ ಸ್ವಸ್ತಿ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರ 41 ಜನ್ಮದಿನ ಶುಭಸಂದರ್ಭ

ಹೊಂಬುಜ: ಇಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಂಬುಜ ಜೈನ ಮಠದ ಪೀಠಾಧಿಪತಿಗಳಾದ ಜಗದ್ಗುರು ಪರಮ ಪೂಜ್ಯ ಸ್ವಸ್ತಿ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರ ಜನ್ಮದಿನವಾಗಿದೆ. ಶ್ರೀಯುತರು 18 ನೇ ಮೇ 1982 ರಲ್ಲಿ ಶ್ರೀ ಅನಂತರಾಜು ಮತ್ತು ಶ್ರೀಮತಿ ಪದ್ಮಾವತಿ ಅನಂತರಾಜು ರವರ ಮಗನಾಗಿ ಜನಿಸಿದರು. ಶ್ರೀಯುತರ ಮೂಲ ಹೆಸರು ಪ್ರವೀಣಕುಮಾರ. ಮೂರೇಹಳ್ಳಿ ಮತ್ತು ತುಂಬುದೇವನಹಳ್ಳಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ಇವರು 1995 ರಲ್ಲಿ ಶ್ರವಣಬೆಳಗೊಳದ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠದ ಆಶ್ರಮದಲ್ಲಿ ಲೌಕಿಕ ಆಗಮಿಕ ಶಿಕ್ಷಣವನ್ನು ಪಡೆದರು. ದಿನಾಂಕ 11-02-2000 ರಂದು ಶ್ರವಣಬೆಳಗೊಳದ ಪರಮ ಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಯಿಂದ ಕ್ಷುಲ್ಲಕ ದೀಕ್ಷೆಯನ್ನು ಪಡೆದುಕೊಂಡರು. 

ಶ್ರೀಯುತರು 17-11-2011 ರಿಂದ ಶ್ರೀ ಕ್ಷೇತ್ರ ಹೊಂಬುಜದ ಪೀಠಾಧಿಪತಿ ಪಟ್ಟವನ್ನಲಂಕರಿಸಿದ್ದಾರೆ. ಅಂದಿನಿಂದಲು ಶ್ರೀಯುತರು ಶ್ರೀ ಕ್ಷೇತ್ರ ಹೊಂಬುಜವು ಸೇರಿದಂತೆ ಶಾಖಾ ಮಠಗಳಾದ ಶ್ರವಣ ಬಸದಿ ಕಾರ್ಕಳಾ, ಚತುರ್ಮುಖ ಬಸದಿ ವರಂಗಾ, ಪಾರ್ಶ್ವನಾಥ ಬಸದಿ ಕುಂದಾದ್ರಿಗಳಾ ಸರ್ವಾಂಗೀನಾ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. 

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023