ಶಿವಮೊಗ್ಗ ಜಿಲ್ಲೆಯ ದ್ಯಾವಿನಕೆರೆ ಗ್ರಾಮದಲ್ಲಿ ಪಾರ್ಶ್ವನಾಥ ತೀರ್ಥಂಕರ ಮೂರ್ತಿ ಪತ್ತೆ
General JAINISM

Posted by admin on 2023-05-19 19:49:10 |

Share: Facebook | Twitter | Whatsapp | Linkedin


ಶಿವಮೊಗ್ಗ ಜಿಲ್ಲೆಯ ದ್ಯಾವಿನಕೆರೆ ಗ್ರಾಮದಲ್ಲಿ ಪಾರ್ಶ್ವನಾಥ ತೀರ್ಥಂಕರ ಮೂರ್ತಿ ಪತ್ತೆ

ಶಿವಮೊಗ್ಗ ಜಿಲ್ಲೆಯ ದ್ಯಾವಿನಕೆರೆ ಗ್ರಾಮದ ರೈತ ಉಮೇಶ ಅವರ ಜಮೀನಿನಲ್ಲಿ ಮಣ್ಣು ಅಗೆಯುವಾಗ ಸುಮಾರು 10 ನೇ ಶತಮಾನದ್ದು ಎನ್ನಲಾಗುವಾ ಪಾರ್ಶ್ವನಾಥ ತೀರ್ಥಂಕರ ಮೂರ್ತಿ ಪತ್ತೆಯಾಗಿದೆ. 

ಉಮೇಶ ಅವರು ಜಮೀನಿನಲ್ಲಿ ಜೆಸಿಬಿಯಿಂದ ಮಣ್ಣೆತ್ತುವಾಗ ಈ ಮೂರ್ತಿ ದೊರಕಿದೆ. ಮೂರ್ತಿಯು 2.4 ಅಡಿ ಎತ್ತರ, 1.4 ಅಗಲ ಇದೆ. ಮೂರ್ತಿಯ ಪೀಠವು ಎರಡು ಅಡಿ ಅಗಲವಿದೆ. ಈ ಪೀಠದಲ್ಲಿ ಜಿನಮೂರ್ತಿಯ ಕುರಿತು ಧರ್ಮಪಾಲನೆಯಲ್ಲಿ, ದ್ರವಿಳಸಂಗ, ನಂದಿಸಂಗ ಆರುಗಳನ್ವಯದ ಅನುಯಾಯಿ, ಭಕ್ತ ಸನ್ನತಿ ದೇವನು ತಾನು ಕೈಗೊಂಡ ಉಪವಾಸದ ವ್ರತದ ನೆನಪಿಗೆ ಈ ಮೂರ್ತಿಯನ್ನು ಮಾಡಿಸದನೆಂದು ಊಲ್ಲೇಖಿಸಲಾಗಿದೆ.

ಶಿವಮೊಗ್ಗದ ಹಲವು ಭಾಗಗಳಲ್ಲಿ ಜೈನ ಧರ್ಮದ ಕುರುಹುಗಳನ್ನು ಕಾಣಬಹುದು. ಕಲ್ಲೂರು ಮಂಡಳಿ (ಗಂಗರು), ಕಾಶೀಪುರ, ಗುಡ್ಡೇಕಲ್ಲು, ಲಕ್ಕವಳ್ಳಿ, ಮಾವಲಗೊಪ್ಪ, ಸಾಗರ, ಹೊಸನಗರ, ತೀರ್ಥಹಳ್ಳಿ ಮುಂತಾದ ಭಾಗಗಳಲ್ಲಿ ಜೈನರ ಪ್ರಮುಖ ಧಾರ್ಮಿಕ ಕೇಂದ್ರಗಳಿದ್ದವು.

(ಮೂಲ : ಪ್ರಜಾವಾಣಿ) 

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023