ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜೈನ ಮುನಿಯೊಬ್ಬರು ಪಾಕಿಸ್ತಾನದಲ್ಲಿ ವಿಹಾರ ಮಾಡಿದ್ದಾರೆ
General JAINISM

Posted by admin on 2023-05-23 13:27:32 | Last Updated by admin on 2023-06-02 12:35:46

Share: Facebook | Twitter | Whatsapp | Linkedin


ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜೈನ ಮುನಿಯೊಬ್ಬರು ಪಾಕಿಸ್ತಾನದಲ್ಲಿ ವಿಹಾರ ಮಾಡಿದ್ದಾರೆ

ವಡೋದರಾ: ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜೈನ ಮುನಿಯೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಬರೋಡದ ಜೈನ ಮುನಿ ಆಚಾರ್ಯ ಧರ್ಮಧುರಂಧರ ಸೂರಿ ಮಹಾರಾಜರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ವಾಘಾದ ಅಟ್ಟಾರಿ ಗಡಿ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಿದ ಮುನಿಗಳು ಲಾಹೋರನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿರುವ ಜೈನರ ಗಚ್ಛಗಳ ಗುರುದೇವ್ ವಿಜಯಾನಂದ ಸೂರಿ ಮಹಾರಾಜ್ (ಆತ್ಮಾರಾಮ ಮಹಾರಾಜ್) ಅವರ ಚರಣ ಪಾದುಕವನ್ನು ಭೇಟಿ ಮಾಡಿದರು.

ಮೂಲತಃ ಪಂಜಾಬನವರಾದ ಆಚಾರ್ಯ ಧರ್ಮಧುರಂಧರಸೂರಿ ಮಹಾರಾಜರು ತಮ್ಮ ಇಡೀ ಕುಟುಂಬದೊಂದಿಗೆ ದೆಹಲಿಯಲ್ಲಿ ಜೈನ ದೀಕ್ಷೆಯನ್ನು ತೆಗೆದುಕೊಂಡು ತಮ್ಮ ಎಲ್ಲಾ ಸಂಪತ್ತನ್ನು ಸಮುದಾಯಕ್ಕೆ ದಾನ ಮಾಡಿದ್ದರು.

ಕರೋನಾ ಸಮಯದಲ್ಲಿ ಪಾವಗಡದಲ್ಲಿ ಚಾತುರ್ಮಾಸದಲ್ಲಿದ್ದಾಗ ಎಂ.ಎಸ್ ವಿಶ್ವವಿದ್ಯಾನಿಲಯವು ಪುಸ್ತಕ ಬರೆಯಲು ಮನವಿ ಮಾಡಿದ್ದರಿಂದ ಆಚಾರ್ಯರು "ಜೀವ್ ಜಗತ್" ಎಂಬ ಪುಸ್ತಕವನ್ನು ಬರೆದರು ಮತ್ತು ಎಂಎಸ್ ವಿಶ್ವವಿದ್ಯಾನಿಲಯದಲ್ಲಿ ಜೀವ್ ಜಗತ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಆಚಾರ್ಯರು ಇನ್ನು ಹೆಚ್ಚಿನ ದೇಶಗಳಲ್ಲಿ ಜೈನ ಧರ್ಮವನ್ನು ಪಸರಿಸಲು ಭಗವಂತನ ಕೃಪೆ ಆಚಾರ್ಯರ ಮೇಲಿರಲೆಂದು ಬೇಡಿಕೊಳ್ಳೋಣ.

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023