ದಿನಾಂಕ 28-05-2023 ರಂದು ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲೂಕಿನ ಅತಿಶಯ ಕ್ಷೇತ್ರ ಇಬ್ರಾಹಿಂಪುರ ಗ್ರಾಮದ ಭಗವಾನ ಶ್ರೀ 1008 ಪಾರ್ಶ್ವನಾಥ ಜೈನ ಮಂದಿರದಲ್ಲಿ ವಾರ್ಷಿಕ ಪೂಜೆ ಆಯೋಜನೆ
General JAINISM

Posted by admin on 2023-05-26 08:20:51 |

Share: Facebook | Twitter | Whatsapp | Linkedin


ದಿನಾಂಕ 28-05-2023 ರಂದು ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲೂಕಿನ ಅತಿಶಯ ಕ್ಷೇತ್ರ ಇಬ್ರಾಹಿಂಪುರ ಗ್ರಾಮದ ಭಗವಾನ ಶ್ರೀ 1008 ಪಾರ್ಶ್ವನಾಥ ಜೈನ ಮಂದಿರದಲ್ಲಿ ವಾರ್ಷಿಕ ಪೂಜೆ ಆಯೋಜನೆ

ಇಬ್ರಾಹಿಂಪುರ : ದಿನಾಂಕ 28-05-2023 ರಂದು ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲೂಕಿನ ಅತಿಶಯ ಕ್ಷೇತ್ರ ಇಬ್ರಾಹಿಂಪುರ ಗ್ರಾಮದ ಭಗವಾನ ಶ್ರೀ 1008 ಪಾರ್ಶ್ವನಾಥ ಜೈನ ಮಂದಿರದಲ್ಲಿ ವಾರ್ಷಿಕ ಪೂಜೆಯನ್ನು ಆಯೋಜನೆ ಮಾಡಲಾಗಿದೆ. ಈ ಗ್ರಾಮದಲ್ಲಿ ಭಗವಾನ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಎರಡು ಜೈನ ಮಂದಿರಗಳಿವೆ. ಈ ಮಂದಿರಗಳ ನಿರ್ಮಾಣ ಸುಮಾರು 1000 ವರ್ಷಗಳ ಹಿಂದೆ ಆಗಿರಬಹುದೆಂದು ಹೇಳಲಾಗುತ್ತದೆ. ನೂರಾರು ವರ್ಷಗಳಿಂದ ಇದರ ಪೂಜಾ ಪುನಸ್ಕಾರಗಳನ್ನು ಬೆಳಗಾವಿಯ ಹೊಸೂರು ಮತ್ತು ಸುತ್ತಮುತ್ತಲಿನ ಪರಿಸರದ ಜನರು ಮಾಡಿಕೊಂಡು ಬಂದಿರುತ್ತಾರೆ.

ಇದೊಂದು ಐತಿಹಾಸಿಕ ಅತಿಶಯ ಕ್ಷೇತ್ರವಾಗಿದ್ದು ಈ ಊರಿನಲ್ಲಿ ಒಂದೇ ಒಂದು ಜೈನ ಕುಟುಂಬವು ವಾಸವಾಗಿರುವುದಿಲ್ಲ. ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಶಾಸಕರಾದ ಶ್ರೀ ಅಭಯ ಪಾಟೀಲ ಅವರ ನೇತೃತ್ವದಲ್ಲಿ ಧಾರ್ಮ ಶಾಲೆಯನ್ನು ಪ್ರಾರಂಭಿಸಲಾಗಿದೆ ಮತ್ತು ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಅತಿಶಯ ಕ್ಷೇತ್ರದ ಬೆಳವಣಿಗೆಗೆ ಸಹಕರಿಸುವುದು ಪ್ರತಿ ಜೈನ ಶ್ರಾವಕ ಮತ್ತು ಶ್ರಾವಕಿಯರ ಕರ್ತವ್ಯವಾಗಿದೆ. ಆದ ಕಾರಣ ಪ್ರತಿಯೊಬ್ಬ ಜೈನ ಸಮಾಜದ ಶ್ರಾವಕ ಮತ್ತು ಶ್ರಾವಕಿಯರು ತಪ್ಪದೆ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ದರ್ಶನ ಪಡೆದು ಪುನೀತರಾಗಬೇಕೆಂದು ಶ್ರೀ ಪಾರ್ಶ್ವನಾಥ ಜೈನ ಮಂದಿರ ಕಮಿಟಿ ಇಬ್ರಾಹಿಮಪುರ ಅವರಿಂದ ತಮ್ಮಲ್ಲಿ ವಿನಂತಿಸಲಾಗಿದೆ.

ಕಾರ್ಯಕ್ರಮದ ವಿವರಗಳು:

  • ಮಂದಿರದ ವಾರ್ಷಿಕ ಪೂಜಾ ಕಾರ್ಯಕ್ರಮಗಳು ದಿನಾಂಕ 28-05-2023 ರಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1-00 ಗಂಟೆಗೆ ಪೂಜೆ ಮತ್ತು ಪ್ರಸಾದ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

  • ರಾಜು ಜಕ್ಕಣ್ಣವರ - 9448191108
  • ಸತೇಜ ಕೂಸಣ್ಣವರ - 9448527650
  • ಪ್ರಮೋದ ಪಾಟೀಲ - 9448114230
  • ಕಿರಣ ಕುಲಕಪ್ಪಿ - 9241231689

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023