Posted by Avinash PB on 2023-07-06 09:55:53 |
Share: Facebook | Twitter | Whatsapp | Linkedin
ಬೆಳಗಾವಿ: ಶುಕ್ರವಾರ ದಿನಾಂಕ 07-07-2023 ರಂದು ಹಿಂದವಾಡಿಯ ಮಹಾವೀರ ಭವನದಲ್ಲಿ ಪ. ಪೂ. ೧೦೮ ಗಣಾಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರ ಪರಮ ಶಿಷ್ಯರಾದ ಕರ್ನಾಟಕ ಕ್ರಾಂತಿಕಾರಿ ಪ. ಪೂ. ಮುನಿಶ್ರೀ 108 ಪ್ರಸಂಗ ಸಾಗರ ಮಹಾರಾಜರ ಪುಷ್ಪ ವರ್ಷಾಯೋಗ ಮಂಗಳ ಕಳಸ ಸ್ಥಾಪನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಅಭಯ ಪಾಟೀಲ, ಮಾಜಿ ಶಾಸಕರಾದ ಶ್ರೀ ಸಂಜಯ ಪಾಟೀಲ, ಉದ್ಯಮಿಗಳಾದ ಶ್ರೀ ಗೋಪಾಲಜಿ ಜೀನಗೌಡ, ಶ್ರೀ ವಿನೋದ ದೊಡ್ಡಣ್ಣವರ, ಶ್ರೀ ಸಚಿನ ಪಾಟೀಲ ಮತ್ತು ಚಾತುರ್ಮಾಸ ಸಮಿತಿ ಅಧ್ಯಕ್ಷರು ಹಾಗೂ ವಕೀಲರಾದ ಶ್ರೀ ರವಿರಾಜ ಪಾಟೀಲರನ್ನು ಆಹ್ವಾನಿಸಲಾಗಿದೆ.
ಕಾರ್ಯಕ್ರಮದ ವಿವರಗಳು: ಮಧ್ಯಾಹ್ನ 01:00 ಕ್ಕೆ ಹಿಂದವಾಡಿ ಬಸದಿಯಿಂದ ಮುನಿ ಮಹಾರಾಜರ ಮೆರವಣಿಗೆಯ ಮೂಲಕ ಮಹಾವೀರ ಭವನದ ಪ್ರವೇಶ, ನಂತರ ಸವಾಲು ಕಾರ್ಯಕ್ರಮ, ಕಳಸ ಸ್ಥಾಪನೆ, ಅತಿಥಿಗಳಿಂದ ಭಾಷಣ ಹಾಗೂ ಮುನಿಗಳಿಂದ ಪ್ರವಚನ ಕಾರ್ಯಕ್ರಮ ನೆರವೇರಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಸಂಜೆಯ ಭೋಜನದ (ವ್ಹಾಸಾ) ವ್ಯವಸ್ಥೆ ಇರುತ್ತದೆ.