ಮುನಿ ಶ್ರೀ ಸುಧಾಸಾಗರ ಮಹಾರಾಜರ ಆಹ್ವಾನದ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ "ಜೀವಂತ ಪ್ರಾಣಿಗಳ" ಆಮದು ಮತ್ತು ರಫ್ತು ಮಸೂದೆಯ ವಿರುದ್ಧ ಧ್ವನಿ: ಸರ್ಕಾರದಿಂದ ಮಸೂದೆ ಹಿಂಪಡೆ

General JAINISM

Posted by admin on 2023-06-22 07:40:43 |


ಮುನಿ ಶ್ರೀ ಸುಧಾಸಾಗರ ಮಹಾರಾಜರ ಆಹ್ವಾನದ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ "ಜೀವಂತ ಪ್ರಾಣಿಗಳ" ಆಮದು ಮತ್ತು ರಫ್ತು ಮಸೂದೆಯ ವಿರುದ್ಧ ಧ್ವನಿ: ಸರ್ಕಾರದಿಂದ  ಮಸೂದೆ ಹಿಂಪಡೆ

ನವದೆಹಲಿ: ಜೀವಂತ ಪ್ರಾಣಿಗಳ ಆಮದು ಮತ್ತು ರಫ್ತಿಗೆ ಅನುಮತಿಸುವ ಶಾಸನದಲ್ಲಿನ ನಿಬಂಧನೆಯ ಬಗ್ಗೆ ಜೈನ ಸಮಾಜವು ಸೇರಿದಂತೆ ಹಲವು ಸಂಘಟನೆಗಳು ಕಳವಳ ವ್ಯಕ್ತಪಡಿಸಿದ ನಂತರ ಸರ್ಕಾರವು "ಜೀವಂತ ಪ್ರಾಣಿಗಳ" ಆಮದು ಮತ್ತು ರಫ್ತು ಮಸೂದೆಯನ್ನು ಹಿಂಪಡೆದಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಜೂನ್ 20 ರಂದು ಜೈನ ಸಮಾಜ, ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ಇತರ ಗುಂಪುಗಳ ಕಳವಳಗಳ ನಡುವೆ ಕರಡು ಮಸೂದೆಯನ್ನು ಹಿಂತೆಗೆದುಕೊಳ್ಳುವ ಕಚೇರಿ ಜ್ಞಾಪಕ ಪತ್ರವನ್ನು ಹೊರಡಿಸಿದೆ.

ವಿಶ್ವ ಜೈನ ಸಂಘಟನೆಯ ರಾಷ್ಟೀಯ ಅಧ್ಯಕ್ಷರಾದ ಸುದೀಪ್ ಜೈನ ಸುದ್ದಿಗಾರರೊಂದಿಗೆ ಮಾತನಾಡುತ್ತ, "ಮುನಿ ಶ್ರೀ ಸುಧಾಸಾಗರ ಮಹಾರಾಜರ ಆಹ್ವಾನದ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ ಮಸೂದೆಯ ವಿರುದ್ಧ ಧ್ವನಿ ಎತ್ತಲಾಗಿತ್ತು. ಜೂನ್ ೧೭ ರಂದು ಜೈನ ಸಮಾಜದ ಶ್ರಾವಕ ಹಾಗೂ ಶ್ರಾವಕಿಯರು ಜೀವಂತ ಪ್ರಾಣಿಗಳ ಆಮದು ಮತ್ತು ರಫ್ತು ಮಸೂದೆಯನ್ನು ಹಿಂಪಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದೆಲ್ಲದರ ಪರಿಣಾಮವಾಗಿ ಪಶುಪಾಲನೆ ಮತ್ತು ಡೇರಿ ಇಲಾಖೆಯ ಸಚಿವರಿಂದ ಜೂನ್ ೭ ರಂದು ಮಂಡನೆಯಾದ ಮಸೂದೆಯನ್ನು ಹಿಂಪಡೆಯಲಾಗಿದೆ" ಎಂದು ಅವರು ಹೇಳಿದರು. 

Recent News
Leave a Comment: