Posted by Avinash PB on 2023-07-08 06:34:19 |
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೂಡಿ ಗ್ರಾಮದ ನಂದಿ ಪರ್ವತ ಆಶ್ರಮದ ಆಚಾರ್ಯ 108 ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಲಾಗಿದೆ. ಜೂಲೈ 5, ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಮುನಿಗಳು ನಾಪತ್ತೆಯಾಗಿದ್ದರು. ಸಹಜವಾಗಿ ಎಲ್ಲೇ ಹೋಗಬೇಕಿದ್ದರು ಮುನಿಗಳು ಪಿಂಚಿ ಹಾಗೂ ಕಮಂಡಲ ತೆಗೆದುಕೊಂಡು ಹೋಗುತಿದ್ದರು. ಆದರೆ ಗುರುವಾರ ಬೆಳಿಗ್ಗೆ ಭಕ್ತರು ಮುನಿಗಳ ದರ್ಶನಕ್ಕೆ ಬಂದಾಗ ಕೇವಲ ಪಿಂಚಿ ಹಾಗೂ ಕಮಂಡಲ ಇರುವುದು ಗಮನಕ್ಕೆ ಬಂದಿತ್ತು. ಗುರುವಾರ ಇಡೀ ದಿನ ಹುಡುಕಾಡಿದ ನಂತರವೂ ಮುನಿಗಳ ಮಾಹಿತಿ ಸಿಗದಿದ್ದಾಗ, ಗ್ರಾಮದ ಜೈನ ಸಮುದಾಯದವರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತಕ್ಷಣ ಕಾರ್ಯ ಪ್ರವರ್ತರಾದ ಪೊಲೀಸರು ತನಿಖೆ ಆರಂಭಿಸಿದ್ದರು. ತದನಂತರ ರಾಯಬಾಗ ತಾಲೂಕಿನ ಕಟಕಭಾವಿ ಗ್ರಾಮದ ಹೊರವಲಯದ ಬೋರವೆಲ್ಲನಲ್ಲಿ ಮುನಿಗಳ ಶವ ಪತ್ತೆಯಾಗಿದೆ. ಆಶ್ರಮದಲ್ಲೇ ಮುನಿಗಳ ಕೊಲೆ ಮಾಡಿ ಬೋರವೆಲ್ಲನಲ್ಲಿ ಶವ ಎಸೆಯಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತವಾಗಿದೆ.
ಕಳೆದ 15 ವರ್ಷಗಳಿಂದ ನಂದಿ ಪರ್ವತ ಆಶ್ರಮದಲ್ಲಿ ಮುನಿಗಳು ನೆಲೆಸಿದ್ದರು. ಮುನಿಗಳ ಕೊಲೆಯಿಂದ ಸಂಪೂರ್ಣ ಜೈನ ಸಮಾಜ ಶೋಕದಲ್ಲಿ ಮುಳುಗಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜಯ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.