ಜೈನ ಮುನಿಯ ವಿರುಧ್ಹ ಅವಹೇಳನಕಾರಿ ಟೀಕೆ ಮಾಡಿದ್ದ ಮಹಿಳೆಯ ವಿರುದ್ಧ ಪ್ರಕರಣ ಮತ್ತು ಜೈಲು ಶಿಕ್ಷೆ

General JAINISM

Posted by admin on 2023-08-12 09:51:03 |


ಜೈನ ಮುನಿಯ ವಿರುಧ್ಹ ಅವಹೇಳನಕಾರಿ ಟೀಕೆ ಮಾಡಿದ್ದ ಮಹಿಳೆಯ ವಿರುದ್ಧ ಪ್ರಕರಣ ಮತ್ತು ಜೈಲು ಶಿಕ್ಷೆ

ಕಟನಿ : ಕಟನಿಯ ಜೈನ ಬೋರ್ಡಿಂಗ್ ನಲ್ಲಿ ಜೈನ ಧರ್ಮಸಭೆಯ ಸಂಧರ್ಭದಲ್ಲಿ ಜೈನ ಮುನಿ ಶ್ರೀ ಆತಿಸ್ಕ್ಯ ಸಾಗರ ಮಹಾರಾಜರನ್ನು ಅವಹೇಳನಕಾರಿಯಾಗಿ ಟೀಕೆ ಮಾಡಿದ್ದ ಪ್ರಕರಣದಲ್ಲಿ ಕಟನಿ ಪೊಲೀಸರು ಮಹಿಳೆಯೊಬ್ಬರ ವಿರುದ್ಧ ಸೆಕ್ಷನ್ 153, 294, 295, 296, 298, 452 ಅಡಿಯಲ್ಲಿ ಪ್ರಕರಣ ದಾಖಲಿಸಿ ಮಹಿಳೆಯನ್ನು ನ್ಯಾಯಾಲಯದಲ್ಲಿ ಪ್ರಸ್ತುತ ಪಡಿಸಿದರು. ತನಿಖೆ ನಡೆಸಿದ ಮಾನ್ಯ ನ್ಯಾಯಾಧೀಶರು ಮಹಿಳೆಗೆ ಜೈಲು ಶಿಕ್ಷೆಯನ್ನು ಪ್ರಕಟಿಸದರು.

ಪ್ರಕರಣದ ಹಿನ್ನೆಲೆ: ದೀನಾಂಕ 01 ಆಗಸ್ಟ್ 2023 ರ ಬೆಳಿಗ್ಗೆ 8 ಘಂಟೆಗೆ ಕಟನಿಯ ಜೈನ ಬೋರ್ಡಿಂಗ್ ನಲ್ಲಿ ಜೈನ ಧರ್ಮ ಸಭೆಯನ್ನು ಆಯೋಜಿಸಲಾಗಿತ್ತು.  ಜೈನ ಮುನಿಗಳಾದ ಶ್ರೀ ಆತಿಸ್ಕ್ಯ ಸಾಗರ ಮಹಾರಾಜರು ಪ್ರವಚನವನ್ನು ನೀಡುತಿದ್ದರು. ಅದೇ ಸಮಯದಲ್ಲಿ ನಸ್ರಿನ್ ಬೇಗಮ್ ಎಂಬ ಮಹಿಳೆ ಸಭೆ ಮದ್ಯ ಪ್ರವೇಶಿಸಿ ಸಂಪ್ರದಾಯವನ್ನು ಪಸರಿಸುವ ಆಶಯದೊಂದಿಗೆ ಮುನಿಗಳ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿದ್ದರು.

ಈ ಘಟನೆಯು ಜೈನ ಸಮುದಾಯದ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿ ಮಹಿಳೆಯನ್ನು ಬಂಧಿಸುವಂತೆ ಜೈನ ಸಮಾಜದ ಶ್ರಾವಕ ಶ್ರಾವಕಿಯರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೊನೆಗೊಳಿಸಲಾಗಿತ್ತು. ತದ ನಂತರ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. 

Recent News
Leave a Comment: