ಶ್ರೀ ಕ್ಷೇತ್ರ ಕನಕಗಿರಿ ಜೈನ ಮಠದಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಕೀರ್ತಿ ಸನ್ಮಾನಕ್ಕೆ ಅರ್ಜಿ ಆಹ್ವಾನ

Education JAINISM

Posted by admin on 2023-08-12 08:46:39 |


ಶ್ರೀ ಕ್ಷೇತ್ರ ಕನಕಗಿರಿ ಜೈನ ಮಠದಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಕೀರ್ತಿ ಸನ್ಮಾನಕ್ಕೆ ಅರ್ಜಿ ಆಹ್ವಾನ

ಮಲೆಯೂರು: ಚಾಮರಾಜನಗರ ಜಿಲ್ಲೆಯ ಮಲೆಯೂರಿನ ಶ್ರೀ ಕ್ಷೇತ್ರ ಕನಗಿರಿಯ ಮೂಲನಾಯಕ ಭಗವಾನ ಶ್ರೀ 1008 ಪಾರ್ಶ್ವನಾಥ ಭಗವಾನರ ಮೋಕ್ಷ ಕಲ್ಯಾಣ ಮಹೋತ್ಸವದ ಪ್ರಯುಕ್ತ ಈ ಬಾರಿಯ ಶೈಕ್ಷಣಿಕ ವಿಭಾಗದಲ್ಲಿ ಸುಳ್ಚ್ ಮತ್ತು ಪುಚ್ ಪರೀಕ್ಷೆಯಲ್ಲಿ 95% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಸಾಧಕರನ್ನು ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಮುಕುಟ ಸಪ್ತಮಿ ಕಾರ್ಯಕ್ರಮದಂದು ಸನ್ಮಾನಿಸಿ ಆಶೀರ್ವದಿಸಲಿದ್ದಾರೆ. ಆದ್ದರಿಂದ 95% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಶ್ರೀ ಮಠದ ಮೊಬೈಲ್ ಸಂಖ್ಯೆಗೆ ವಾಟ್ಸ್ ಆಪ್ ಮೂಲಕ ತಮ್ಮ ಅಂಕಪಟ್ಟಿ ಹಾಗೂ ಸಂಪರ್ಕ ಸಂಖ್ಯೆಯನ್ನು ಕಳುಹಿಸಿ ಕೊಡೆಬೇಕೆಂದು ವಿನಂತಿಸಲಾಗಿದೆ. ಅಂಕಿಪಟ್ಟಿ ಪರಿಶೀಲಿಸಿದ ಮೇಲೆ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳನ್ನು ಸಂಪರ್ಕಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವ್ಯವಸ್ಥಾಪಕರು

ಶ್ರೀ ಜೈನ ಮಠ,

ಶ್ರೀ ಕ್ಷೇತ್ರ ಕನಗಿರಿ

ಮೊಬೈಲ್ ಸಂಖ್ಯೆ - 98803 86208

Recent News
Leave a Comment: