ಶಾಂತಿಗಿರಿಯಲ್ಲಿ ಮಹಾಮಸ್ತಕಾಭಿಷೇಕ ಹಾಗೂ ಆಚಾರ್ಯ ದೇಶಭೂಷಣ ಮುನಿ ಮತ್ತು ಆಚಾರ್ಯ ವರದತ್ತ ಸಾಗರ ಮುನಿಗಳ ಪುಣ್ಯತಿಥಿ ಕಾರ್ಯಕ್ರಮ
Social JAINISM

Posted by admin on 2023-05-21 10:37:00 | Last Updated by admin on 2024-04-26 12:36:33

Share: Facebook | Twitter | Whatsapp | Linkedin


ಶಾಂತಿಗಿರಿಯಲ್ಲಿ ಮಹಾಮಸ್ತಕಾಭಿಷೇಕ ಹಾಗೂ ಆಚಾರ್ಯ ದೇಶಭೂಷಣ ಮುನಿ ಮತ್ತು ಆಚಾರ್ಯ ವರದತ್ತ ಸಾಗರ ಮುನಿಗಳ ಪುಣ್ಯತಿಥಿ ಕಾರ್ಯಕ್ರಮ

ಕೊಥಳಿ: ಸಮೀಪದ ಕುಪ್ಪನವಾಡಿಯ ಶಾಂತಿಗಿರಿಯಲ್ಲಿ ಮೇ 20, 2023 ರಂದು ಮಹಾಮಸ್ತಕಾಭಿಷೇಕ ಹಾಗೂ ಆಚಾರ್ಯ ದೇಶಭೂಷಣ ಮುನಿ ಮತ್ತು ಆಚಾರ್ಯ ವರದತ್ತ ಸಾಗರ ಮುನಿಗಳ ಪುಣ್ಯತಿಥಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದ ಸಾನಿಧ್ಯವನ್ನು 108 ಆಚಾರ್ಯ ಶಾಂತಿಸೆನ, 108 ಸಮಾಧಿಭೂಷಣ ಹಾಗೂ 105 ಆರ್ಯಕಾ ನಿಸಪ್ರಹಮತಿ ಮಾತಾಜಿ, ನಾಂದಣಿ ಜಿನಸೇನ ಭಟ್ಟಾರಕ, ಕೊಲ್ಲಾಪುರದ ಲಕ್ಷ್ಮಿಸೆನ ಭಟ್ಟಾರಕರು ವಹಿಸಿದ್ದರು.

ದಿನಾಂಕ್ ಮೇ 20 ರ ಬೆಳಿಗ್ಗೆ 5 ಗಂಟೆಯಿಂದ ಸಂಜೆ 6 ರ ವರೆಗೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಮಹಾಶಾಂತಿಧಾರ, ಜಿನವಾಣಿ ಹಾಗೂ ಕೋತಳಿ ಗ್ರಾಮದಿಂದ ಆಚಾರ್ಯ ಶ್ರೀಗಳ ತೈಲ ಚಿತ್ರ ಮೆರವಣಿಗೆ ಮತ್ತು ಶೋಭಯಾತ್ರೆ ನಡೆಯಿತು. ಶ್ರೀಗಳ ಚರಣ ಪಾದಕ್ಕೆ ಅಭಿಷೇಕ,ಶ್ರೀ ಶಾಂತಿನಾಥ ವಿಧಾನ ಮತ್ತು ವಿನಯಂಜಲಿ ಸಭೆ ಜರುಗಿತು.

ಸಂಜೆ, 1008 ಭ. ಶಾಂತಿನಾಥ, ಭ. ಚಂದ್ರಪ್ರಭು, ಭ. ಮಹಾವೀರರ ಮೂರ್ತಿಗಳಿಗೆ ನಿತಿನ ಗಾಂಧಿ, ಅಶೋಕಕುಮಾರ ಜೈನ, ಕಿರಣ್ ಪಾಟೀಲ್, ಪ್ರಶಾಂತ್ ಪಾಟೀಲ್, ಬಾರಾಮತೀಯ ಭರತ ಹಾಗೂ ಶ್ರೇಣಿಕ್ ದೋಷಿ, ಅನಿತಾ ಹೋನವಾಡೆ ಅವರಿಂದ ಮಸ್ತಕಾಭಿಷೇಕ ನೆರವೇರಿತು.

ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ, ಮಾಜಿ ಸಚಿವ ವೀರಕುಮಾರ ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ, ಶಾಸಕರಾದ ಗಣೇಶ ಹುಕ್ಕೇರಿ, ಅಭಯ ಪಾಟೀಲ, ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಷ್ಟೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ, ಮಾಜಿ ಶಾಸಕರಾದ ಸಂಜಯ ಪಾಟೀಲ, ಮಹಾಂತೇಶ್ ಕವಟಗಿಮಠ, ಶ್ರಾವಬೆಳಗೊಳದ ಪ್ರಾಕೃತ ವಿದ್ಯಾಪೀಠದ ಸಂಚಾಲಕರಾದ ಜಯಕುಮಾರ ಉಪಾಧ್ಯೆ, ವಿನೋದ ದೊಡ್ಡಣ್ಣವರ ಹಾಗೂ ಮತ್ತಿತರನ್ನು ಆಹ್ವಾನಿಸಲಾಗಿತ್ತು.

ಶಾಂತಿನಾಥ ಉಪಾಧ್ಯೆ, ಬಾಹುಬಲಿ ಉಪಾಧ್ಯೆ ಮತ್ತು ಸ್ಥಳೀಯ ಪಂಡಿತರಾದಂತಹ ಕೋಮಲಕುಮಾರ ಉಪಾಧ್ಯೆ ಅವರು ಕಾರ್ಯಕ್ರಮದ ವಿಧಿ ವಿಧಾನ ನೆರವೇರಿಸಿಕೊಟ್ಟರು.

ಟ್ರಸ್ಟ್ ಕಮಿಟಿ ಅಧ್ಯಕ್ಷ ವರ್ಧಮಾನ ಸದಲಗೆ, ಪಾಸಾಗೌಡ ಪಾಟೀಲ, ಸಂದೀಪ ಪಾಟೀಲ, ತಾತ್ಯಾಸಾಹೇಬ ಖೋತ, ತಾತ್ಯಾಸಾಹೇಬ ಪಾಟೀಲ, ಕಿರಣ ಪಾಟೀಲ, ಪಾಯಗೊಂಡ ಖೋತ ಮತ್ತಿತರರು ಉಪಸ್ಥಿತರಿದ್ದರು.

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2024