ಮುನಿ ಶ್ರೀ 108 ಸಮತ್ವ ಸಾಗರ ಮಹಾರಾಜರ ಸಲ್ಲೇಕನಪೂರ್ಣ ಸಮಾಧಿಮರಣವು ದಿನಾಂಕ 21 ಮೇ 2023 ರ ಮದ್ಯಾಹ್ನ 12:34 ಕ್ಕೆ ಸಮಾಪ್ತವಾಯಿತು
Culture JAINISM

Posted by admin on 2023-05-22 20:43:02 |

Share: Facebook | Twitter | Whatsapp | Linkedin


ಮುನಿ ಶ್ರೀ 108 ಸಮತ್ವ ಸಾಗರ ಮಹಾರಾಜರ ಸಲ್ಲೇಕನಪೂರ್ಣ ಸಮಾಧಿಮರಣವು ದಿನಾಂಕ 21 ಮೇ 2023 ರ ಮದ್ಯಾಹ್ನ 12:34 ಕ್ಕೆ ಸಮಾಪ್ತವಾಯಿತು

ನವದೆಹಲಿ: ಪರಮ ಪೂಜ್ಯ ಪಾಕೃತಚಾರ್ಯ ಶ್ರೀ 108 ಸುನಿಲ ಸಾಗರ ಮಹಾರಾಜರ ಪರಮ ಶಿಷ್ಯರಾದಂತಹ ಮುನಿ ಶ್ರೀ 108 ಸಮತ್ವ ಸಾಗರ ಮಹಾರಾಜರ ಸಲ್ಲೇಕನಪೂರ್ಣ ಸಮಾಧಿಮರಣವು ದಿನಾಂಕ 21 ಮೇ 2023 ರ ಮಧ್ಯಾಹ್ನ 12:34 ಕ್ಕೆ ದಿಲ್ಲಿಯ ಜಾಗೃತಿ ಏನ್ಕ್ಲಿವ್ ನಲ್ಲಿ ಸಮಾಪ್ತವಾಯಿತು.


16 ನೇ ತೀರ್ಥಂಕರರಾದ ಶಾಂತಿನಾಥ ಭಗವಾನರ ಜನ್ಮ ದಿನವಾದ ಮೇ 18, 2023 ರ ಶುಭದಿನದಂದು ಕ್ಷುಲ್ಲಕ ಮುನಿ ಸಮತ್ವ ಸಾಗರ ಮಹಾರಾಜರಿಗೆ ಆಚಾರ್ಯ ಶ್ರೀ ಸುನಿಲ ಸಾಗರರವರು ಮುನಿ ದೀಕ್ಷೆಯನ್ನು ನೀಡಿದ್ದರು.

ಈ ಶುಭದಿನದಂದು ಹಲವಾರು ಜೈನ ಮುನಿಗಳು ಉಪವಾಸವನ್ನು ಕೈಗೊಂಡಿದ್ದರು. ಇದೆ ಸಂದರ್ಭದಲ್ಲಿ ಐದು ಮುನಿಗಳ ಕೇಶಲೋಚನ ಕಾರ್ಯಕ್ರಮವು ನೆರವೇರಿತ್ತು.

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023